ಬಳ್ಳಾರಿ : ನಮ್ಮ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಸಮರ್ಥವಾಗಿದ್ದಾರೆ. ಎಲ್ಲ ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನ ತಕ್ಷಣ ಅರೆಸ್ಟ್ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು, ಗೃಹ ಸಚಿವ ಆರಗ ಜ್ಞಾನೇಂದ್ರರನ್ನ ಸಮರ್ಥಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ಪಿಎಸ್ಐ ಅಕ್ರಮ ನೇಮಕಾತಿಯನ್ನ ಬಗ್ಗೆ ನಾವೇ ಕಂಡುಹಿಡಿದಿದ್ದು. ಕಾಂಗ್ರೇಸ್ ನವರೇನು ಕಂಡಿಡಿದಿಲ್ಲ, ಅವರು ಅಧಿಕಾರದಲ್ಲಿದ್ದಾಗ ಈ ರೀತಿ ತನಿಖೆ ಮಾಡಿಲ್ಲ. ನಾವೇ ಕಂಡುಹಿಡಿದು, ನಾವೇ ತನಿಖೆ ಮಾಡ್ತಿದ್ದೇವೆ. ನಾವು ಮಾಡಿದ ತನಿಖೆಯನ್ನ ಅವರು ಮಾಡಿದ್ದೇವೆ ಎನ್ನುವುದಕ್ಕೆ ಅರ್ಥ ಇಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ : "ಪರೀಕ್ಷೆಗೆ ಹಾಜರಾದರೆ ಕ್ರಿಮಿನಲ್‌ ಕೇಸ್‌"...ರಘುಪತಿ ಭಟ್‌ ವಿರುದ್ಧ ಆರೋಪ


ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಬರೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ವರಿಷ್ಠರಿಗೆ ಬಿಟ್ಟಿದ್ದು. ಮೊನ್ನೆ ನೆಡೆದ ಕಾರ್ಯಕಾರಿಣಿಯಲ್ಲಿ ರೆಡ್ಡಿ ಬಗ್ಗೆ ಚರ್ಚೆಯಾಗಿಲ್ಲ.ಕಾದು ನೋಡೋಣ ಏನ್ ಆಗತ್ತೆ ಅಂತಾ ಹೇಳಿದ್ದಾರೆ. 


ಶಾಸಕ ರಾಜುಗೌಡ ರಾಮುಲು ಭಿನ್ನಾಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜುಗೌಡ ಹಾಗೂ ನನ್ನ ಮಧ್ಯೆ ಭಿನ್ನಪ್ರಾಯ ಇಲ್ಲ. ನಾವಿಬ್ಬರು ಸಹೋದರರಿದ್ದಂತೆ. ಅವರಿಗೆ ಸ್ವಲ್ಪ ಕನ್ಫ್ಯೂಷನ್‌ ಆಗಿರಬಹುದಷ್ಟೇ ಎನ್ನುವ ಮೂಲಕ ರಾಮುಲು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು. 


ರಾಜ್ಯದಲ್ಲಿ ಆಗುತ್ತಿರುವ ಕೋಮು ಗಲಭೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ, ಕಾಂಗ್ರೆಸ್ ನವರೇ ನೇರ ಕಾರಣ. ಚುನಾವಣೆ ವರ್ಷವಾಗಿರುವ ಕಾರಣ ಕಾಂಗ್ರೆಸ್ ನವರು ಗಲಭೆ ಸೃಷ್ಠಿ ಮಾಡ್ತಿದ್ದಾರೆ. ಕೆಜಿ ಹಳ್ಳಿ, ಡಿಜಿ ಹಳ್ಳಿ, ಹುಬ್ಬಳ್ಳಿಯಲ್ಲಿ ಗಲಭೆ ಸೃಷ್ಠಿ ಮಾಡ್ತಿದ್ದಾರೆ. ಇಡೀ ರಾಜ್ಯಾದ್ಯಂತ ಇದೇ ರೀತಿ ಗಲಭೆ ಸೃಷ್ಠಿ ಮಾಡ್ತಾರೆ ಎನ್ನುವ ಅನುಮಾನ ನನಗಿದೆ. ಕಾಂಗ್ರೆಸ್ ಅಧಿಕಾರರಕ್ಕೆ ಬರಲ್ಲ ಎನ್ನುವ ಕಾರಣಕ್ಕೆ ಈ ರೀತಿ ಗಲಭೆ ಮಾಡಿಸುತ್ತಿದ್ದಾರೆ. ಅದಕ್ಕಾಗಿ ಎಲ್ಲ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ನವರು ಹಿಂದೂ ಮುಸಲ್ಮಾನರ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ಕಾಂಗ್ರೇಸ್ ನವರ ಮಾತಿಗೆ ಮರುಳಾಗಬಾರದು, ರಾಜ್ಯದ ಜನ‌ ಜಾಗೃತರಾಗಿರಬೇಕು ಎಂದು ಕಾಂಗ್ರೇಸ್ ವಿರುದ್ದ ಕಿಡಿ ಕಾರಿದ್ದಾರೆ. 


ಇದನ್ನೂ ಓದಿ : ವಲಸೆರಾಮಯ್ಯರಿಗೆ ತನ್ನದೆಂದು ಹೇಳಿಕೊಳ್ಳುವ ಒಂದೂ ಕ್ಷೇತ್ರವೂ ಇಲ್ಲ: ಬಿಜೆಪಿ ವ್ಯಂಗ್ಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.